Sunday, March 11, 2007

ಎಡ - ಬಲ

ಸುಮಾರು ಆರು-ಏಳು ವರ್ಷಗಳ ಹಿಂದೆ..ಸ್ನೇಹಿತರೊಡನೆ ಬೆಂಗಳೂರಿನ ಜಯನಗರದಿಂದ ಬಸವನಗುಡಿಗೆ ಆಟೋರಿಕ್ಷಾ ನಲ್ಲಿ ಹೋಗುತ್ತಿದ್ದೆವು. ನನ್ ಸ್ನೇಹಿತ ಆಟೋಚಾಲಕನಿಗೆ, ಇಲ್ಲಿ ಎಡಕ್ಕೆ ಹೋಗಿ ಎಂದ. ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ' ಸಾರ್, ಎಡ-ಬಲ ಅಂತ ಹೇಳಿ confuse ಮಾಡ್ಬೇಡಿ. right-ಒ, left-ಒ ಹೇಳಿ ಸಾರ್' ಅಂದ!

೯೯-೦೦ ನಲ್ಲಿ ಈ ಘಟನೆ ನಡೆದಾಗ, ಇದೊಂದು ಅಪರೂಪದ ಘಟನೆ, ಬೆಂಗಳೂರಿನಲ್ಲಿ ಈ ರೀತಿಯಾಗಲು ಸಾಧ್ಯವೇ ಇಲ್ಲ ಎಂದೆನಿಸಿತ್ತು. ಕನ್ನಡ ಜನಗಳಂತೂ ಈ ರೀತಿಯಾಗಲ್ಲ ಅಂದೆನಿಸಿತ್ತು.

೨೦೦೫...ಮತ್ತೆ ಬೆಂಗಳೂರಿನಲ್ಲಿ ಆಟೋ ಪ್ರಯಾಣ ಶುರು ಆಯಿತು. exception ಆಗಿದ್ದ left-right, ಈಗ norm ಆಗಿಬಿಟ್ಟಿದೆ . ಎಡ, ಬಲ ಅಂದ್ರೆ ಅರ್ಥ ಆಗೋದೇ ಇಲ್ಲ ಜನಕ್ಕೆ. ಇಲ್ಲಿ ಕೇವಲ ಆಟೋಚಾಲಕರ ಬಗ್ಗೆ ಹೇಳುತ್ತಿಲ್ಲ, ನಾವೆಲ್ಲರೂ ಹೀಗೇ ಆಗ್ಬಿಟ್ಟಿದೀವಿ. ಒಂದ್ ಕಡೆ ಇಂಗ್ಲಿಷ್ ಸರಿಯಾಗಿ ಮಾತಾಡಕ್ಕೆ ಬರಲ್ಲ, ಕನ್ನಡವನ್ನೂ ಹದಗೆಡಸಿಯಾಗಿದೆ. ನಾನೇನು ಎಲ್ಲವೂ ಅಚ್ಚ ಕನ್ನಡವೇ ಬೇಕು ಅಂತ ವಾದಿಸಲ್ಲ. ಹೊಸದನ್ನು ಬೇರೆ ಭಾಷೆಗಳಿಂದ ಪಡೆಯೋಣ. ಆ ಪದಗಳನ್ನೇ ಕನ್ನಡೀಕರಣಗೊಳಿಸೋಣ (ಉದಾ: ಬಸ್, ಕಂಪ್ಯೂಟರ್, ಕ್ಯಾರೆಟ್, ಟೊಮೇಟೊ), ಆದರೆ ಮೂಲಭಾಷೆಯ ಎಡ, ಬಲ, ಚಿಲ್ಲರೆ, ಹತ್ತು, ಐವತ್ತು ಎಂಬುವನ್ನೇ ನಾವು left, right, change, ten, fifty ಮಾಡಿದ್ರೆ ಹೇಗೆ? ಇದು ಬೆಳವಣಿಗೆಯೋ ಅಥವಾ ..?

ದುಖಃದ ಸಂಗತಿ ಎಂದರೆ ಇದರ ಹಾವಳಿ ಬೇರೆ ನಗರ, ಪಟ್ಟಣಗಳಿಗೂ ಹರಡಿವೆ। ಇಂಗ್ಲಿಷ್ ವ್ಯಾಮೋಹ ಕೇವಲ ಭಾಷೆಗಷ್ಟೇ ಸೀಮಿತವಾಗಿದೆ (ಜ್ಞಾನಕ್ಕಂತೂ ಅಲ್ಲ). ಮಕ್ಕಳಿಗೆ ಬೇಕಾದುದು ಉತ್ತಮ ಗಣಿತ, ವಿಜ್ಞಾನ ಕಲಿಕೆ. ಆ ನಿಟ್ಟಿನಂತಲ್ಲೂ ಸರ್ಕಾರವಾಗಲೀ, ಖಾಸಗಿ ಶಿಕ್ಷಣ ಕೇಂದ್ರಗಳಾಗಲೀ ಪ್ರಯತ್ನಿಸುತ್ತಿಲ್ಲ.

ನಮ್ಮ ಸಂಸ್ಥೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ , ಟಿ. ಎನ್. ಸೀತಾರಾಮ್ ಅವರು ಸಂವಾದದಲ್ಲಿ ಒಂದು ಪ್ರಶ್ನೆಗೆ ಉತ್ತರವಾಗಿ ಹೀಗೆ ಹೇಳಿದ್ರು.. " ನಮ್ಮೆಲ್ಲರ ಕನ್ನಡ ಪ್ರಜ್ಞೆ ಹೇಗಿದೆಯೆಂದರೆ ಮನೆ ಮುಂದೆ ಬರುವ ಸೊಪ್ಪಿನವಳ ಜೊತೆ 'ಟು ರುಪೀಸ್' ಅಂತ ಇಂಗ್ಲಿಷ್ ನಲ್ಲಿ ಮಾತಾಡ್ತೀವಿ. ಬೆಲೆ ಜಾಸ್ತಿ ಅನಿಸಿದ್ರೆ ಚೌಕಾಸಿ ಮಾಡಕ್ಕೆ 'ಎಂಟಾಣೆ ಕಡಿಮೆ ಮಾಡ್ಕೋಮ್ಮಾ' ಅಂತೀವಿ! ಹೇಗಿದೆ ನಮ್ಮ ಕನ್ನಡ ಪ್ರಜ್ಞೆ!

ಈ ಹುಚ್ಚುತನವು ಹರಿಯುವ ನದಿಯೋ ಅಥವಾ ಇಲ್ಲೇ ಇರುವುದಕ್ಕೆ ಬಂದಿರುವುದೋ?

2 comments:

Archu said...

ಚೆನ್ನಾದಿದೆ..
ಬರೆಯುತ್ತಿರಿ..
ಸಿರಿಗನ್ನಡಂ ಗೆಲ್ಗೆ!!

shivu.k said...

ಎಡ ಬಲ ಅನುಭವ ಚೆನ್ನಾಗಿದೆ. ಹಾಗೂ ನನಗೂ ತುಂಬಾ ಆಗಿದೆ. ಬರೆಯುತ್ತಿರಿ.
ನಾನು ಹೊಸ ಬ್ಲಾಗಿಗ. ನಾನು ಛಾಯಾಗ್ರಾಹಕನಾದ್ದರಿಂದ ನಿಮಗಲ್ಲಿ ಫೋಟೊ ಮತ್ತು ಲೇಖನಗಳು ಇಷ್ಟವಾಗಬಹುದು. ಬನ್ನಿ ನೋಡಿ.

ನನ್ನ ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ"ನಲ್ಲಿ ಒಂದು ಹೊಸ ವಿಚಾರದಬಗ್ಗೆ ಲೇಖನ ಬರೆಯುತ್ತಿದ್ದೇನೆ. ಬನ್ನಿ ನೀವೊಮ್ಮೆ ಓದಿ ನೋಡಿ ಇಷ್ಟವಾಗಬಹುದು.
ಶಿವು.ಕೆ